ನಾನು ಬೆತ್ತಲಾದಾಗ..
--------------------
ನೀನು ಸನಿಹವಿದ್ದಷ್ಟು ಘಳಿಗೆ,
ಹೊತ್ತು, ಸರಿದು ಮುಸುಕು ಹೊದ್ದು
ನಿದ್ದೆಗೆ ಜಾರಿದ್ದು ತಿಳಿಯಲಿಲ್ಲ.
ಏಕೆಂದರೆ ನನ್ನ ಪ್ರೀತಿ ಬಲಿಯುತ್ತಿತ್ತು;
ಬಯಕೆ ಬುಸುಗುಟ್ಟುತ್ತಿತ್ತು;
ನಿಜ! ಅಷ್ಟೇಕೆ,
ನಿನ್ನ ಮೈ ವಾಸನೆಯಲಿ ಅರಳಿ
ತುಂಬಿದೆದೆಯ ನಡುವೆ ನಲುಗಿ
ನಿನ್ನನ್ನೇ ಆವರಿಸುವಷ್ಟು ದಾಹ!
ಸಂಸರ್ಗದಲಿ ಸಂಸಿದ್ಧಿ ಹೊಂದುವ ತವಕ!
ಬಯಕೆ ಆಸೆ ಮೋಹ ಪ್ರೀತಿಗೆ ಲೇಪ
ನೀನು, ಅದರ ನೆರಳೆಂದರೂ ಸರಿಯೇ!
ನೆರಳಂತೆ ಮನಸ್ಸು,
ಹಿಂಬಾಲಿಸುತ್ತಲೇ ಇರುತ್ತದೆ
ಭಾವನೆಗಳಿಗೆ ಆತ್ಮಸಾಕ್ಷಿ ಬಾಗಿಲು
ಆತ್ಮವಂಚನೆ ನನಗೆ ಸಿದ್ಧಿಸಿಲ್ಲ
ಬೆತ್ತಲೆ ಊರಲ್ಲಿ ಬೆದೆಗೆ ಬಂದವನಲ್ಲ
ನಿನ್ನ ಮುಂದೆ ಬೆತ್ತಲಾಗಬೇಕಷ್ಟೇ!
ಬೆಳಕು ಬೆತ್ತಲೆಯಲ್ಲವೇ?
ಹಾಗೆ ನಾನು ಬೆತ್ತಲೆ!
--------------------
ನೀನು ಸನಿಹವಿದ್ದಷ್ಟು ಘಳಿಗೆ,
ಹೊತ್ತು, ಸರಿದು ಮುಸುಕು ಹೊದ್ದು
ನಿದ್ದೆಗೆ ಜಾರಿದ್ದು ತಿಳಿಯಲಿಲ್ಲ.
ಏಕೆಂದರೆ ನನ್ನ ಪ್ರೀತಿ ಬಲಿಯುತ್ತಿತ್ತು;
ಬಯಕೆ ಬುಸುಗುಟ್ಟುತ್ತಿತ್ತು;
ನಿಜ! ಅಷ್ಟೇಕೆ,
ನಿನ್ನ ಮೈ ವಾಸನೆಯಲಿ ಅರಳಿ
ತುಂಬಿದೆದೆಯ ನಡುವೆ ನಲುಗಿ
ನಿನ್ನನ್ನೇ ಆವರಿಸುವಷ್ಟು ದಾಹ!
ಸಂಸರ್ಗದಲಿ ಸಂಸಿದ್ಧಿ ಹೊಂದುವ ತವಕ!
ಬಯಕೆ ಆಸೆ ಮೋಹ ಪ್ರೀತಿಗೆ ಲೇಪ
ನೀನು, ಅದರ ನೆರಳೆಂದರೂ ಸರಿಯೇ!
ನೆರಳಂತೆ ಮನಸ್ಸು,
ಹಿಂಬಾಲಿಸುತ್ತಲೇ ಇರುತ್ತದೆ
ಭಾವನೆಗಳಿಗೆ ಆತ್ಮಸಾಕ್ಷಿ ಬಾಗಿಲು
ಆತ್ಮವಂಚನೆ ನನಗೆ ಸಿದ್ಧಿಸಿಲ್ಲ
ಬೆತ್ತಲೆ ಊರಲ್ಲಿ ಬೆದೆಗೆ ಬಂದವನಲ್ಲ
ನಿನ್ನ ಮುಂದೆ ಬೆತ್ತಲಾಗಬೇಕಷ್ಟೇ!
ಬೆಳಕು ಬೆತ್ತಲೆಯಲ್ಲವೇ?
ಹಾಗೆ ನಾನು ಬೆತ್ತಲೆ!