ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Monday, December 12, 2011

...ಅವಳಿಗೂ ಹೃದೆಯವಿದೆ ....

ದೀಪದ ಕೆಳಗಿನ ಕತ್ತಲೆ.
----------------------
ಉತ್ಸಾಹದಿಂದ ಬಂದವನಿಗೆ
ಮೈಯನ್ನೇ ಹಾಸಿಗೆಯನಿಸಿ
ಮೈ ಬಿಸುಪನ್ನು ಬಸಿದು
ಹಗುರಾಗಿಸಿದವಳ
ಒಡಲ ಅರ್ತನಾದಾದಗಳು
ಕರಗಿ ಹೋಗಿವೆ ಕಾರಿರುಳಲ್ಲಿ.

ಕನಸುಗಳು ಕಣ್ಣೀರುಡುವಾಗ
ಅವಳ ಆಸೆಗಳಿಗೇನು ಕೆಲಸ!
ಕದವಿಕ್ಕಿ ಕುಳಿತ ಮನಕೆ
ಕತ್ತಲೆ ಅವಳ ಜೊತೆಗಾರನಲ್ಲವೆ!?
ಅವಳ ಪಾಲಿಗೆ ಬೆಳಕು ಬೇಗೆಯಾಗಿದೆ.

ಅವಳಿಗೊಂದು ಬದುಕಿದೆ
ಆ ಬವಣೆಯ ಹಿಂದೆ ಹಸಿವಿದೆ
ನೆಚ್ಚಿಕೊಂಡ ಹೊಟ್ಟೆಗಳ ಹಿಂದೆ
ಅಪ್ಪಿಕೊಂಡ ಸಂಬಂಧದ ಮೇಲೆ
ಬೆದೆಗೆ ಬಂದ ನಾಯಿಗಳು ಸವಾರಿ ಮಾಡಿವೆ.!

ಆದರೆ...!!!

ತನ್ನಂತಾನೆ ಉರಿದುಕೊಂಡು
ಬೆಳಕ ಕೊಡುವ
ದೀಪದ ಕೆಳಗಿನ ಕತ್ತಲೆ ಅವಳು.!!

2 comments:

  1. ತನ್ನಂತಾನೆ ಉರಿದುಕೊಂಡು
    ಬೆಳಕ ಕೊಡುವ
    ದೀಪದ ಕೆಳಗಿನ ಕತ್ತಲೆ
    ಕಂಡವರಾರು....ಮರುಗುವರಾರು...?
    ಸುಂದರವಾದ ಸಾಲುಗಳು... ಸತೀಶಣ್ಣ...

    ReplyDelete
  2. ಈ ಕವಿತೆಯಲ್ಲಿರುವ ಪಾತ್ರರಾಣಿ ಮೈಯ ಬೆತ್ತಲೆಗೆ ಕಣ್ಣೀರು ಸುರಿಸಿದ ಕುರುಹು ಇದೆ.ಬೇಸಿಗೆ ಬಿಸಿಯಲ್ಲೂ ಮಳೆಯಂತೆ ಸುರಿದ ದುಃಖ್ಖಗಳು ಚರಂಡಿ-ಗಟಾರದಲ್ಲಿ ಕೊಚ್ಚೆಯಂತೆ ಹರಿದ ಕವಿತೆಯ ಪ್ರತಿಮೆ ಹೊಸ ಭಾವಗಳ ಹುಡುಕಾಟವನ್ನು ಚುರುಕುಗೊಳಿಸಿತು. ಚೆನ್ನಾಗಿದೆ ಕವಿತೆ.

    ReplyDelete