--ಜ್ಯೋತಿಷ್ಯದ ತಮ್ಮಯ್ಯ--
-----------------------------
ನಾನು ಹೈಸ್ಕೂಲಿನಲ್ಲಿ ಓದುತಿದ್ದಾಗ, ಚಿತ್ರಕಲೆ ವಿಷಯದ ಬಗ್ಗೆ ತಮ್ಮಯ್ಯ ಎಂಬುವರು ಬೋಧಕರಾಗಿದ್ದರು. ಕೋತಿ ನಾಯಿ ಹಾವು ಕರಡಿ ಗುಲಾಬಿ ಗಣೇಶ ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನು ಚನ್ನಾಗಿ ಬಿಡಿಸುತಿದ್ದರು. ನಾವು ಸಹ ಅಷ್ಟೇ ಕಲಿತಿದ್ದು. ಚಿತ್ರಕಲೆ ಪರೀಕ್ಷೆಗೆಂದು ಪಕ್ಕದ ಚನ್ನಪಟ್ಟಣಕ್ಕೆ ಹೋಗಿದ್ದೆವು. ತಮ್ಮಯ್ಯನವರು ಹೇಳಿಕೊಟ್ಟಿದ ಯಾವೊಂದು ಅಂಶವು ಪ್ರಶ್ನೆ ಪತ್ರಿಕೆಯಲ್ಲಿ ಕಾಣದೆ ಕಕ್ಕಾ- ಬಿಕ್ಕಿಯಾಗಿ, ಅವರ ಮೇಲೆ ಕೋಪಗೊಂಡು ಅದೇ ಸಿಟ್ಟಿನಲ್ಲಿ ಪಕ್ಕದ ಚಲನ ಚಿತ್ರಮಂದಿರದಲ್ಲಿ ನಡೆಯುತಿದ್ದ ' ಅನುಭವ ' ಎಂಬ ಕುತೂಹಲಕಾರಿ ಸಿನೆಮಾ ನೋಡಿ ನಮ್ಮ ಕೋಪವನ್ನು ಸ್ವಲ್ಪ ಮಟ್ಟಿಗೆ ಶಮನ ಮಾಡಿಕೊಂಡಿದ್ದು ಇನ್ನು ನೆನಪಿದೆ. ತಮ್ಮಯ್ಯನವರ ಮತ್ತೊಂದು ಪಾರ್ಟ್ ಟೈಮ್ ಉದ್ಯೋಗವಿತ್ತು. ಜ್ಯೋತಿಷ್ಯ ಹೇಳುವುದು. ಅದನ್ನು ಕೇಳಿದವರಿಗೆ ಎಷ್ಟು ಲಾಭವಾಗಿತ್ತು ಎಂಬುದು ನನಗೆ ತಿಳಿಯದ ವಿಚಾರ. ನಗರದಲ್ಲಿ ಯಾವುದಾದರು ಬಿಳಿ ಕಾಂಪೌಂಡ್ ಅವರ ಕಣ್ಣಿಗೆ ಬಿತ್ತೆಂದರೆ ಸಾಕು, ಆ ರಾತ್ರಿಯೇ ಹೋಗಿ ಆ ಗೋಡೆಯ ಮೇಲೆ, '' ತಮ್ಮಯ್ಯನವರ ಜ್ಯೋತಿಷ್ಯಾಲಯ'' ಮಾಟ-ಮಂತ್ರ, ವಶೀಕರಣ, ಧನಲಾಭ, ಆರೋಗ್ಯ ಇವುಗಳ ಬಗ್ಗೆ ಜ್ಯೋತಿಷ್ಯ ಹೇಳಲಾಗುವುದು. ಒಮ್ಮೆ ಭೇಟಿ ಕೊಡಿ ಎಂದು ವಿಳಾಸ ಬರೆದಿರುತಿದ್ದರು. ಮನೆಯ ಮಾಲೀಕರು ಬೆಳಿಗ್ಗೆ ಎದ್ದು ಗೋಡೆಯ ಮೇಲಿನ ಬರಹವನ್ನು ನೋಡಿ ಕೆಂಡಮಂಡಲವಾಗುತಿದ್ದರು. ಮನೆಯ ಬಳಿ ಹೋಗಿ ತಮ್ಮಯ್ಯನವರ ಕೊರಳ ಪಟ್ಟಿಯನ್ನು ಹಿಡಿದು ಕೇಳಬೇಕೆಂದುಕೊಳ್ಳುವಷ್ಟರಲ್ಲಿ ತಕ್ಷಣ ಅಷ್ಟೇ ಬೇಗ ತಣ್ಣಾಗಾಗುತಿದ್ದರು. ಕಾರಣ.., ಕೆಂಪು ಬಣ್ಣದಿಂದ ಬರೆದಿರುತ್ತಿದ್ದ ಮಾಟ-ಮಂತ್ರ, ವಶೀಕರಣ ಎಂಬ ಪದಗಳು. ಕೇಳುವುದಕ್ಕೆ ಹೋದರೆ ತಮಗೂ ಮಾಟ ಮಂತ್ರ ಮಾಡಿ ಬಿಟ್ಟಾರೆಂಬ ಹೆದರಿಕೆಗೆ ಸುಮ್ಮನಾಗುತಿದ್ದರು. ತಮ್ಮಯ್ಯನವರು ಜ್ಯೋತಿಷ್ಯ ಹೇಳುವುದಕ್ಕೆಂದು ಪ್ರತ್ಯೇಕ ಜಾಗವನ್ನೇನು ಮಾಡಿರಲಿಲ್ಲ. ಮನೆಯ ಒಂದು ಕೋಣೆಯನ್ನು ಭವಿಷ್ಯ ಹೇಳಲು ಮೀಸಲಾಗಿಟ್ಟಿದ್ದರು.
ಹೀಗೆ ಜ್ಯೋತಿಷ್ಯ ಚಿತ್ರಕಲೆ ಎರಡರಲ್ಲೂ ತೊಡಗಿಸಿಕೊಂಡಿದ್ದ ತಮ್ಮಯ್ಯನವರು ಆ ಬೇಸಿಗೆ ರಜೆಯಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡು ಬರಬೇಕೆಂದು ನಿರ್ಧರಿಸಿದವರೇ ಸಕುಟುಂಬ ಸಮೇತರಾಗಿ ಪ್ರವಾಸ ಹೊರಡಲು ದಿನಾಂಕವನ್ನು ನಿಗಧಿ ಮಾಡಿಕೊಂಡಿದ್ದರು. ಅದೇ ಸಂದರ್ಭದಲ್ಲಿ ತಾನು ಪ್ರವಾಸ ಹೊರಟುಬಿಟ್ಟರೆ ಶಾಸ್ತ್ರ ಕೇಳಲು ಬರುವ ಜನರಿಗೆ ತೊಂದರೆಯಾಗುತ್ತದಲ್ಲ ಎಂಬ ಚಿಂತೆ ಸಹ ಕಾಡತೊಡಗಿತು. ಆದರೆ ಹೆಂಡತಿ ಮಕ್ಕಳು ಪ್ರವಾಸ ಹೋಗಲೇ ಬೇಕೆಂದು ಹಠ ಹಿಡಿದ ಕಾರಣ ಒಲ್ಲದ ಮನಸ್ಸಿನಿಂದ ಪ್ರವಾಸಕ್ಕೆ ಸಿದ್ಧರಾದರು. ಪ್ರವಾಸ ಹೊರಡುವ ದಿನ ಮನೆಯ ಬಾಗಿಲಿಗೆ ಒಂದು ಬೋರ್ಡನ್ನು ಬೆರೆದು ತೂಗು ಹಾಕಿ ಹೊರಟರು. ಅದರಲ್ಲಿ '' ಜ್ಯೋತಿಷ್ಯ ಶಾಸ್ತ್ರಜ್ಞ ತಮ್ಮಯ್ಯ ಹಾಗು ಕುಟುಂಬದವರು ಮೂರು ದಿನಗಳ ಕಾಲ ಪ್ರವಾಸ ಹೋಗಿರುವುದರಿಂದ, ಭಕ್ತರು ೩ ದಿನ ಬಿಟ್ಟು ಬರುವುದು. ದಯವಿಟ್ಟು ಸಹಕರಿಸಿ '' ಎಂದು ಬರೆದಿತ್ತು...!
ತಮ್ಮಯ್ಯ ಮತ್ತು ಕುಟುಂಬದವರು ಧರ್ಮಸ್ಥಳ, ಹೊರನಾಡು, ಶೃಂಗೇರಿ, ಕೊಲ್ಲೂರು, ಕಳಶ, ಉಡುಪಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ಹಾಗು ಹೊರನಾಡು ಈ ಎಲ್ಲಾ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ಯಾವುದೇ ತೊಂದರೆಯಿಲ್ಲದಂತೆ ಗುರುವಾರ ಹಿಂದಿರುಗಿದರು. ತಮ್ಮಯ್ಯ ಟ್ಯಾಕ್ಸಿಯಿಂದ ಇಳಿದವರೇ ಕೀ ತೆಗೆದುಕೊಂಡು ಡೋರ್ ಲಾಕಿನ ಹೊಳಗೆ ಹಾಕಿದರು ಅಷ್ಟೇ. ಕೀಯನ್ನು ತಿರುವಲೇ ಇಲ್ಲ. ಬಾಗಿಲು ತಾನೇ ತಾನಾಗಿ ಹಿಂದೆ ಹೋಯಿತು. ಒಳಗಿನ ದೃಶ್ಯ ನೋಡಿ ತಮ್ಮಯ್ಯನವರಿಗೆ ತಲೆ ತಿರುಗಿದಂತಾಯ್ತು. ಹಿಂದೆಯೇ ಒಳ ಬಂದ ಹೆಂಡತಿ ಮಕ್ಕಳು ಅವಕ್ಕಾಗಿ ನಿಂತುಬಿಟ್ಟರು. ಒಂದು ಕ್ಷಣ ಅವರಿಗೆಲ್ಲ ಬೇರೆ ಮನೆಗೆ ಬಂದಿದ್ದೇವೆಯೇ ಎಂಬ ಅನುಮಾನ ಕಾಡತೊಡಗಿತು. ಆದರೆ ಬಾಗಿಲಿಗೆ ನೇತು ಹಾಕಿದ್ದ ಬೋರ್ಡು ಇದೇ ತಮ್ಮಯ್ಯನವರ ಮನೆಯೆಂದು ಸಾರಿ ಹೇಳುತ್ತಿತ್ತು.
ನಡೆದದ್ದಿಷ್ಟೇ...., ತಮ್ಮಯ್ಯನವರು ಪ್ರವಾಸ ಹೋಗಿದ್ದಾಗ ಬಾಗಿಲಿಗೆ ನೇತು ಹಾಕಿದ್ದ ಬೋರ್ಡು ದಾರಿಹೋಕರ ಗಮನ ಸೆಳೆಯುತ್ತಿತ್ತು. ಅದರಲ್ಲೂ ವಿಶೇಷವಾಗಿ ಕಳ್ಳರ ಗಮನವನ್ನು ಸೆಳೆಯಿತು. ತೊಂದರೆಯಿಲ್ಲದ ಅವಕಾಶ, ಅಕ್ಕ-ಪಕ್ಕ ಯಾವುದೇ ಮನೆ ಸಹ ಇರಲಿಲ್ಲ. ಮನೆಯವರು ಬರುವುದು ಇನ್ನು ಮೂರು ದಿನವಾಗುತ್ತದೆ ಎಂದು ಬಾಗಿಲಿಗೆ ತೂಗು ಹಾಕಿದ್ದ ಬೋರ್ಡು ಸಾರಿ ಸಾರಿ ಹೇಳುತಿದೆ. ಕಳ್ಳರಿಗೆ ಖುಷಿಯೋ ಖುಷಿ. ಕಳ್ಳರು ಹಗಲಿನಲ್ಲಿಯೇ ಒಂದು ಲಾರಿಯನ್ನು ತಂದವರೇ ಕೆಟ್ಟುಹೋಗಿದೆ ಎಂಬಂತೆ ತಮ್ಮಯ್ಯನವರ ಮನೆ ಮುಂದೆ ನಿಲ್ಲಿಸಿ, ಆ ರಸ್ತೆಯಲ್ಲಿ ಬೇರೆ ವಾಹನಗಳು ಬಾರದಂತೆ ಕಲ್ಲನ್ನು ಅಡ್ಡ ಇಟ್ಟಿದ್ದರು. ಆ ದಾರಿಯಲ್ಲಿ ತಿರುಗಾಡುವವರು ಲಾರಿ ಕೆಟ್ಟು ನಿಂತಿರಬೇಕೆಂದು ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದೆ ಹೋಗುತಿದ್ದರು. ಕಳ್ಳರು ಮಧ್ಯರಾತ್ರಿಯಲ್ಲಿ ಬಂದವರೇ, ಜ್ಯೋತಿಷ್ಯದ ಕೋಣೆಯಲ್ಲಿದ್ದ ಸಾಮಾನುಗಳನ್ನು ಬಿಟ್ಟು, ಕಸ ಗುಡಿಸುವ ಪೊರಕೆ ಸಮೇತ ಸಾವಾಕಾಶವಾಗಿ ಮನೆಯಲ್ಲಿದ್ದ ಎಲ್ಲಾವಸ್ತುಗಳನ್ನು ಕದ್ದು ಲಾರಿಯಲ್ಲಿ ಸಾಗಿಸಿದ್ದರು...............................,

ಹ್ಹ ಹ್ಹ... ಪಾಪ ಅಣ್ಣಯ್ಯನ ಗ್ರಹಚಾರವೇ ಕೆಟ್ಟಿತ್ತು.. ಚೆನ್ನಾಗಿದೆ :)
ReplyDeleteಅಯ್ಯೊಯ್ಯೋ ..ಕೋಲು ಕೊಟ್ಟು ಪೆಟ್ಟು ತಿಂದಂತಾಯಿತು ಅಣ್ಣಯ್ಯನ ಪರಿಸ್ತಿತಿ . ಹೀಗೆ ನೋಟಿಸು ಹಾಕುವುದು ತುಂಬಾ ಅಪಾಯ .ಕೆಲವರಿಗೆ ತಮ್ಮ ಮುಖಪುಸ್ತಕದ ವಾಲ್ ಮೇಲೆ ,ತಾವು ಒಂದು ವಾರ ಪ್ರವಾಸದಲ್ಲಿದೇವೆ ,ತೀರ್ಥಯಾತ್ರೆ ಕೈಗೊಂಡಿದ್ದೇವೆ ,ಎಂದು ಬರೆದು ಹಾಕುವ ಅಭ್ಯಾಸ ಇದೆ .ಎಲ್ಲವನ್ನೂ ಮುಗಿಸಿ ಬರುವಾಗ ಪಾತ್ರೆ ,ಪಗಡೆ ಯಾವುದು ಇರುವುದಿಲ್ಲ ,ಕಳ್ಳರು ಇಂತಹ ಸಮಯಕ್ಕೆ ಹೊಂಚು ಹಾಕುತ್ತಲೇ ಇರುತ್ತಾರೆ .ಹಾಸ್ಯದ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೂಡ ಕೊಟ್ಟಿದ್ದೀರಾ ಸತೀಶಣ್ಣ
ReplyDelete