ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Monday, August 5, 2013

ಮೈಲಿಗೆ
------------
ನನ್ನ ಅಷ್ಟೂ ಕನಸುಗಳನ್ನು
ಮೂಟೆ ಕಟ್ಟಿ ಅಟ್ಟದ ಮೇಲೆಸೆದಿದ್ದೆ.
ಈಗ ಒ೦ದೊ೦ದಾಗಿ ತೆರೆಯುತಿದ್ದೇನೆ
ಚಿತ್ರವಿಲ್ಲ ಬರಹವಿಲ್ಲ ಖಾಲಿ ಖಾಲಿ
ಆಶ್ಚರ್ಯ, ಕನಸಿಗೆ ಮೈಲಿಗೆ ಮೆತ್ತಿದೆ!

ಅಡಿಪಾಯವಿಲ್ಲದ ನೆಲದ ಮೇಲಿನ
ಸೂರಿನ ಕೇಳಗಿನ ಉಸಿರು, ಬೆನ್ನುತೋರಿಸಿ ಚಿತೆಗೆ
ಇದ್ದಷ್ಟು ದಿನ ಜೀವ೦ತ ಶವ.
ನನ್ನ ದೇಹದ ಸ್ವಾಧೀನ ಪರಾವಲ೦ಬಿ
ಈಗ ಉಸಿರಿಗೂ ಮೈಲಿಗೆ ಮೆತ್ತಿದೆ!

ದನಿಯೆತ್ತುವ ನಾಲಿಗೆಯ ನರಕು೦ದಿದೆ!
ಊಳಿಡುವ ನರಿಗಳ ಕೂಗು ಕಿವಿ ತು೦ಬಿದೆ!
ಸತ್ಯ ತಿಳಿವ ಕಣ್ಣಲ್ಲಿ ತು೦ಬಿ ಬರುತಿದೆ ಹಳದಿ
ವ್ರಣ ಕೆರೆದಷ್ಟು ನಚ್ಚಗೆ, ಮತ್ತಷ್ಟು ದೊಡ್ಡ ಗಾಯ
ಕ್ರಮೇಣ ಮೈ ಮನಸ್ಸೆಲ್ಲ ಮೈಲಿಗೆ!


1 comment:

  1. ಇದೊಂದೇ ಕವಿತೆ ಮುಂದಿಟ್ಟುಕೊಂಡು ಸುದೀರ್ಘ ಭಾವಾರ್ಥ ಬರೆಯುತಾ ಹೋಗಬಹುದು. ತುಂಬಾ ಕಿಚಾರಗಳು ಅಡಗಿವೆ ಈ 15 ಸಾಲುಗಳ ಆಳದಲ್ಲಿ.
    http://badari-poems.blogspot.in/

    ReplyDelete