ಎಲ್ಲಂದರಲ್ಲೇ
ಕಾರಿಕೊಳ್ಳುವ ಕನಸುಗಳು
ಹಾದಿ ತಪ್ಪಿದ ಗಮ್ಯ
ಲಗ್ಗೆಯಿಟ್ಟಲ್ಲೆಲ್ಲ ಕಾಮನ ಚಿತ್ರಗಳೇ....!
ಕಣ್ಣು ಹಾಯಿಸಿದಲ್ಲೆಲ್ಲ
ಉಬ್ಬು ತಗ್ಗುಗಳ ಮೆರೆವಣಿಗೆ
ಬೆರಗಿನಾಕರ್ಷಣೆ
ನಿಂತಲ್ಲೇ ಬಿಸಿಯುಸಿರ ಸ್ನಾನ
ಕಣ್ಣ ತುಂಬೆಲ್ಲ ನಕ್ಷತ್ರಗಳೇ ....!
ಜಾರುವ ಮನಸಿನೋಳಗೊಂದು
ಹಸಿ ಬಿಸಿ ಬಯಕೆಗಳ ಮೇಲಾಟ...!
ಬೆವರ ವಾಸನೆಗೆ
ಕನಸಿನೂರಿನ ಬಾಗಿಲ ಬಡಿದು
ಒಮ್ಮೆ ಇಣುಕುವಾಸೆ...,
ಆವೇಗ ಆವಿಯಾಗುವ ಮೊದಲೇ
ಹೊಸಲೋಕವನ್ನೊಮ್ಮೆ ಸ್ಪರ್ಶಿಸಿ
ಪ್ರಕೃತಿಯಲಿ ಲೀನವಾಗಿ
ಬೀಗುವಾಸೆ.....?
ಅದ್ಭುತವಾದ ಕವಿತೆ ಸತೀಶಣ್ಣ.. ಹದಿ ಹರೆಯದವರ ಮನಸ್ಥಿತಿಗಳನ್ನು ತುಂಬಾ ಅರ್ಥಗರ್ಭಿತವಾಗಿ ಬಿಂಬಿಸಿದ್ದೀರಿ.. ಏನೆಲ್ಲವನ್ನು ಅಂಗೈಯಲ್ಲಿ ನೋಡಿಬಿಡಬೇಕು ಅನ್ನುವ ಅವರ ಹಂಬಲಗಳು ಅವರನ್ನು ಹಾದಿ ತಪ್ಪಿಸಿಬಿಡುತ್ತವೆ ಎಂಬ ಸತ್ಯಗಳು ಅವರ ಅರಿವಿಗೆ ಬರುವುದೇ ಇಲ್ಲ.. ಅದು ಅವರ ಅರಿವಿಗೆ ಬರುವ ಮುನ್ನವೇ ಅವರ ಕಾಲುಗಳು ಜಾರಿ ಬಾಳು ಬರಡಾಗಿರುತ್ತದೆ.. ಹರೆಯ, ಮತ್ತು ದೇಹದ ಬದಲಾವಣೆಳು ಅವರನ್ನು ಹೊಸ ಜಗತ್ತನ್ನು ಅನ್ವೇಷಿಸಲು ಪ್ರೇರೇಪಿಸುತ್ತಿರುತ್ತವೆ.. ಪ್ರೀತಿ-ಪ್ರೇಮಗಳು ಅರ್ಥವಾಗುವ ಮೊದಲೆ ಅನರ್ಥಗಳು ಘತಿಸಿಹೋಗಿರುತ್ತವೆ ಎಂಬ ಸತ್ಯಗಳನ್ನು ಮಾರ್ಮಿಕವಾಗಿ ತೆರೆದಿಡುವ ಕವಿತೆ., ಹಿಡಿಸುತ್ತದೆ.. ಪದಗಳ ಪ್ರಯೋಗದಲ್ಲಿ ಪ್ರಬುದ್ಧತೆಯನ್ನು ಗುರುತಿಸಬಹುದು ಮತ್ತು ಮನಮುಟ್ಟು ನಿರೂಪಣೆ ಶ್ಲಾಘನೀಯವಾದುದು..
ReplyDeleteಆವೇಗ ಆವಿಯಾಗುವ ಮೊದಲೇ
ಹೊಸಲೋಕವನ್ನೊಮ್ಮೆ ಸ್ಪರ್ಶಿಸಿ
ಪ್ರಕೃತಿಯಲಿ ಲೀನವಾಗಿ
ಬೀಗುವಾಸೆ.....?
ಈ ಸಾಲುಗಳು ನನ್ನನ್ನು ಬಹುವಾಗಿ ಕಾಡುತ್ತಿವೆ.. ತುಂಬಾ ಹಿಡಿಸಿತು ಕವಿತೆ..
ಹರೆಯದ ಕನವರಿಕೆಗಳು ಮನೋರಮೆಯಾಗಿ ಅರಳಿವೆ.ಕನಸನೂರಿನ ಬಾಗಿಲು ಬಡಿದು ಒಮ್ಮೆ ಇಣುಕುವಾಸೆಯ......ಮನದಿಂಗತ ಬಹು ಅಂದವಾದುದು.ಬೀಗುವಾಸೆಯ ಅಮಲಿನಲ್ಲಿರುವಾಗಲೇ ಹೊಸದೊಂದು ಲೋಕ ಸೃಷ್ಟಿಯಾಗುತ್ತಲೇ ಇರುತ್ತದೆ.ಅದೂ ಸಹ ಪ್ರಕೃತಿ ನಿಯಮ.ಏನೇ ಆದರೂ ಕವನ ಕಟ್ಟಿದ ರೀತಿಯೇ ಅನೋನ್ಯ ಅನುಭವ ನೀಡುವುದು.ಆನಂದಿಸಿದೆ.
ReplyDeleteಮಾನವನ ಜೀವನದಲ್ಲಿ ಹರೆಯದ ವಯಸ್ಸಿನಲ್ಲಿ ಕೆಲವರಲ್ಲಿ ಕಾಣಿಸುವ ಅಲ್ಲೋಲ್ಲ ಕಲ್ಲೋಲಗಳ ಕವನ ರೂಪದ ವಿಶ್ಲೇಷಣೆ ಅತೀ ಸೊಗಸಾದ ರಚನೆ .. :)
ReplyDelete