ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Saturday, June 16, 2012

------ಋತುಮಾನ -------




ಮೊಗ್ಗು ಮೈನೆರೆದಾಗಿನ 
ಬದಲಾದ  ಮೈಯ ಬಿಸುಪು, 
ಮಾದಕತೆ ಮೈತಾಕಿ, 
ಕುತೂಹಲವಾಯ್ತು ಇಮ್ಮಡಿ.
ವಿಸ್ಮಯವಿಲ್ಲಿ ವಿಹಿತ,
ಅದು ಬರೀ ಬೆರಗಲ್ಲ.!
ಅಡಿಯಿಂದ ಮುಡಿಯವರೆಗಿನ ಅಚ್ಚರಿ.!! 
ಅಂಕು ಡೊಂಕಿನ ದಾರಿ
ಇಕ್ಕೆಲಗಳಲ್ಲಿ ಹಸಿರು ತುಂಬಿ, 
ಮಾಘದಲ್ಲಿ  ತೂಗಿ  ಬಾಗೋ   
ವಯ್ಯಾರದ ಪ್ರಕೃತಿ ಸೊಬಗ,
ಉಬ್ಬು ತಗ್ಗುಗಳ ಕಣಿವೆಯಲ್ಲಿ 

ಕಳೆದುಹೋದ ಕ್ಷಣದಲಿ, 
ಸ್ತಂಭಿಸಿದ ಬೀಸು ಗಾಳಿಯ 
ನಡುವೆ,  ಸೌಸವದ ಬೆವರು.!
ಘನೀಭವಿಸಿದ ಮೋಡ.
ಹನಿಯಾಗಿ ಸ್ಖಲಿಸುವ ಮುಂಚಿ-
ನಲಿ, ಗುಡುಗು ಮಿಂಚಿನಾರ್ಭಟ
ಸೋನೆ ಮಳೆಗೆ
ಮನ ತಣಿದ  ಇಳೆಯಂತೆ.
ಸ್ವಾದದ ಅನುಭೂತಿ 
ಸಂತೃಪ್ತಿಯ,  ಬೆನ್ನಿಗಂಟಿದ 
ಸೃಷ್ಟಿಯ ರಹಸ್ಯ.!  
ಪ್ರಕೃತಿಯ ಸಮ್ಮಿಲನದಿ   
ಬೆತ್ತಲು ಬಯಲು,
ಹೊಸ ದೃಷ್ಟಿಯ ಉಗಮ.  

1 comment:

  1. ವಾವ್, ಒಂದು ತರಹ ರೋಮಾಂಚನಗೊಳಿಸುವ ಶೈಲಿ ನಿಮ್ಮದು.

    ವರ್ಣನೆ ಮತ್ತು ಶೈಲಿ ಮಮಮುಟ್ಟಿತು.

    ನನ್ನ ಬ್ಲಾಗಿಗೂ ಸ್ವಾಗತ.
    www.badari-poems.blogspot.com

    ReplyDelete