ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Tuesday, January 18, 2011

 Holding Hands Beach   
\\ ನೀ ಹೀಗೆ ಕೊಲ್ಲಬೇಡ //

ಕೊಲ್ಲುವುದಾದರೆ ಕೊಂದುಬಿಡು
ನೀ ಹೀಗೆ ಕಾಡಬೇಡ/ 
ಎಲ್ಲರ ತೊರೆದು ಬಂದು ಬಿಡು
ನೀ ಹೀಗೆ ಕೊಲ್ಲಬೇಡ//


ಜಾತಿ-ಜನಿವಾರ ನೋಡಬೇಡ 
ಮೈಲಿಗೆ ಆದೀತು ನಮ್ಮ ಪ್ರೀತಿ ನೋಡ/
ಮೇಲು-ಕೀಳು ಹೊಸದಲ್ಲ ಜಗದಲಿ 
ಬಂದಿಯಾಗಿರೋ ಮಾನಸ ಬಿಚ್ಚಿ ಒಮ್ಮೆ ನನ್ನ ನೋಡು//

ಜನುಮ ಜನುಮದ ಕನಸು ಬೇಡ 
ಇಂದೇ ಜೋಡಿಯಾಗಿ ಬಿಡುವ/ 
ಈ ಜನುಮಕ್ಕಷ್ಟೇ ಸಾಕು 
ನಿನ್ನ ತುಂಬು ಪ್ರೀತಿ ನೋಡ//

ಸೂರ್ಯ-ಚಂದ್ರರನೆ ತಂದು 
ಬೆಳಕಾಗಿಸುವೆನೆಂದು ಸುಳ್ಳು ನುಡಿಯೇನು  ಜಾಣೆ/
ಏನೇ ಬರಲಿ ಕಹಿಯಲ್ಲವ ನಾ  ನುಂಗಿ 

ಸಿಹಿ ಮಾತ್ರ ನಿನಗೆ ನಂಬು ನನ್ನಾಣೆ..// 

Monday, January 3, 2011

ನೀ ನಿಲ್ಲದೆ..ನಾ ನಿಲ್ಲ

ನೀ ಬರುವುದು ಅರೆಕ್ಷಣ ನಿಧಾನವಾದರೂ 
ಸಹಿಸಲಾರೆನು ಪ್ರತಿಕ್ಷಣ..ವಿರಹ ನೂರು ತರಹ
ನೀನಿಲ್ಲದ ಬಾಳು ಬಾಳಲ್ಲ 
ನಿನ್ನ ಕಾಣದೆ ಬದುಕೇ ಇಲ್ಲ..

ಚಂದಿರನಿಲ್ಲದ ಬಾನೆಲ್ಲಿ..? 
ಕಿರಣ ಬೀರದ ಸುರ್ಯನೆಲ್ಲಿ..?
ಕಾಂತಿಯ ಬೀರುವ ನೀನೆಲ್ಲಿ..?
ಕವಿದ ಕತ್ತಲ ಸರಿಸಿ ಬಂದು ಬಿಡು ಗೆಳತಿ..

ನನ್ನ ಕವಿತೆಗೆ 
ನೀನೆ ಕೊನೆ ಮೊದಲ ಸಾಲು 
ನಿನ್ನ  ಪ್ರೇಮಕೆ 
ಮೊಗೆದು ಕೊಡುವೆ ನನ್ನ ಪ್ರೀತಿ ಪಾಲು..  
 Love Image 367792

ನಿಗೂಢ

  ನಿಗೂಢ 

ಎತ್ತ ನೋಡಿದರು 
ಬದುಕು ಬಟ್ಟ ಬಯಲು 
ಬೂದಿ ಮುಚ್ಚಿದ ಕೆಂಡ 
ನಡೆದರೆ ಸುಡು ಧರಣಿ
ಬಟ್ಟ ಬಯಲ ನಡುವೆ 
ಬೆತ್ತಲಾಗಿ ನಿಂತ ಅನುಭವ 
ಕೇಕೆ ಹಾಕಿ ನಗುತಿರುವ 
ದಿಕ್ಕೆಟ್ಟ ಆತ್ಮಗಳು,
ಚಿತೆ ಆರಿದರು 
ಚಿಂತೆಯಿಂದ ಅರೆಬೆಂದ ಶವಗಳು,
ಸುಳಿಗಾಳಿ ಸುಳಿಯೇ 
ಮೈಯಲ್ಲ  ರಕ್ತದ ಅಂಟು 

ಇದು ನಿಗೂಢ ಮನಸ್ಸಿನ 
ಸೊಗಡು ವ್ಯಕ್ತಿತ್ವದ 
ಕಥೆ-ವ್ಯಥೆ..