ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Tuesday, January 18, 2011

 Holding Hands Beach   
\\ ನೀ ಹೀಗೆ ಕೊಲ್ಲಬೇಡ //

ಕೊಲ್ಲುವುದಾದರೆ ಕೊಂದುಬಿಡು
ನೀ ಹೀಗೆ ಕಾಡಬೇಡ/ 
ಎಲ್ಲರ ತೊರೆದು ಬಂದು ಬಿಡು
ನೀ ಹೀಗೆ ಕೊಲ್ಲಬೇಡ//


ಜಾತಿ-ಜನಿವಾರ ನೋಡಬೇಡ 
ಮೈಲಿಗೆ ಆದೀತು ನಮ್ಮ ಪ್ರೀತಿ ನೋಡ/
ಮೇಲು-ಕೀಳು ಹೊಸದಲ್ಲ ಜಗದಲಿ 
ಬಂದಿಯಾಗಿರೋ ಮಾನಸ ಬಿಚ್ಚಿ ಒಮ್ಮೆ ನನ್ನ ನೋಡು//

ಜನುಮ ಜನುಮದ ಕನಸು ಬೇಡ 
ಇಂದೇ ಜೋಡಿಯಾಗಿ ಬಿಡುವ/ 
ಈ ಜನುಮಕ್ಕಷ್ಟೇ ಸಾಕು 
ನಿನ್ನ ತುಂಬು ಪ್ರೀತಿ ನೋಡ//

ಸೂರ್ಯ-ಚಂದ್ರರನೆ ತಂದು 
ಬೆಳಕಾಗಿಸುವೆನೆಂದು ಸುಳ್ಳು ನುಡಿಯೇನು  ಜಾಣೆ/
ಏನೇ ಬರಲಿ ಕಹಿಯಲ್ಲವ ನಾ  ನುಂಗಿ 

ಸಿಹಿ ಮಾತ್ರ ನಿನಗೆ ನಂಬು ನನ್ನಾಣೆ..// 

No comments:

Post a Comment