ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Tuesday, April 10, 2012

---- ನನ್ನ ಶೀಲ ----

ನೆನಪೇ ನೆಪವಾಗಿ 
ಹೃದಯ ಬೇನೆಯಂತೆ
ಕಾಡುತಿದೆ ಎನ್ನ..
ಬೇವರ್ಸಿ ಬದುಕಿನಲಿ
ಬಂದ ಬಿನ್ನಾಣ ಪಾತ್ರ...!

ಸೋಣೆ ಮಾಸದಲ್ಲಿ ಬಂದ 
ಸೋನೆಯಂತೆ 
ತುಂತುರು ಪ್ರೀತಿ 
ಭೂಮಿ ತೋಯ್ಯಲಿಲ್ಲ 
ಬರೀ ಮಿಂಚಿನ ಆರ್ಭಟ..!!

ನೆರಳು ಬೆಳಕಿನ ನಾಟ್ಯ 
ಬಿಸಿಲುಗುದುರೆಯಂತೆ 
ಬಿಸುಪು ಮೈದುಂಬಿ
ಸೋಗು ಹಾಕಿ ಪೌರುಷದ 
ಸೊಕ್ಕು ಮುರಿದಳು...!!!

ಪಾತರಗಿತ್ತಿಯಾಗಿ 
ನನ್ನುಸಿರ  ಕದ್ದೋಯ್ಯದು 
ಹೃದಯದ ತುಂಬೆಲ್ಲಾ 
ಅತೃಪ್ತ  ಆತ್ಮಗಳನ್ನಿರಿಸಿ
ನೋವಿನ ಸೆಲೆಯಾಗಿಸಿದಳು...

ಶೀಲವೆಂಬುದು ಅವಳಿಗೆ 
ಶಿಥಿಲವಾಯಿತು
ಸುಶೀಲನೆಂಬ ಹಣೆಪಟ್ಟಿ 
ನನ್ನಿಂದ ಕಳಚಿಹೋಯಿತು 
ಮನಸ್ಸಾಕ್ಷಿ  ಇಲ್ಲಿ ಮಲಿನವಾಯಿತು.

      [ಪ್ರೀತಿಯಿಂದ ಸತೀಶ್ ರಾಮನಗರ ]

3 comments:

  1. ಮನಸ್ಸು ಇನ್ನಷ್ಟು ಭಾರವಾಗಬೇಕು. ಅಸ್ತವ್ಯಸ್ತ ಬದುಕಿನಲ್ಲಿ ಕೆಲವಸ್ತು ಶಿಥಿಲಗಳಿಗೆ ತೇಪೆ ಹಚ್ಚಲೇ ಬೇಕು. ಅದು ಪದಗಳು. ಸುಂದರವಾಗಿದೆ. ತೊಡಕುಗಳಿದ್ದರೂ ಮುಂದೆ ಸರಿಯಾಗಬಹುದು. ಚೆನ್ನಾಗಿದೆ ಕವಿತೆ.

    ReplyDelete
  2. ನೆನಪೇ ನೆಪವಾಗಿ ಶೀಲವನ್ನೇ ಕಳಚಿಕೊಂಡ ಭಾವದ ಭಿತ್ತಿ ಪತ್ರ ಈ ಕವಿತೆ, ಉತ್ಕೃಷ್ಟವಾಗಿದೆ ಸತೀಶಣ್ಣ.. ಸಮಯ ಕಳೆಯಲೆಂದೋ, ಹರೆಯದ ತುಡಿತಕ್ಕೋ, ತನ್ನ ಅಂದದ ಮೇಲಿನ ಜಂಭಕ್ಕೋ, ಮತ್ತಾವುದೋ ತೆವಲಿಗೋ ಪ್ರೀತಿಯೆಂದು ಕಳ್ಳ ಪ್ರೀತಿಯ ಸೋಗು ಹಾಕುವವರನ್ನು ಬೆತ್ತಲು ಮಾಡಿದೆ ನಿಮ್ಮ ಕವಿತೆ..! ಪ್ರೀತಿಯ ದಿವ್ಯವಾದ ವ್ಯಾಖ್ಯಾನ ಸಿಗುತ್ತದೆ ಕವಿತೆಯಲ್ಲಿ.. ನೆನಪೂ ಶೀಲಹರಣ ಮಾಡಬಲ್ಲದು ಎಂದರೆ ಕವಿಮನದೊಳಗಿನ ಪ್ರೀತಿಯ ಪಾವಿತ್ರ್ಯದ ಅರಿವಾಗುತ್ತದೆ.. ಪ್ರೀತಿಯ ವಿಭಿನ್ನವಾದ ಮಜಲನ್ನು ಎತ್ತಿ ಹಿಡಿದ ನಿಮ್ಮ ಸೃಜನಶೀಲತೆಗೆ ನನ್ನದೊಂದು ಸಲಾಂ.. ತೀವ್ರವಾದ ಭಾವಸ್ರಾವವಿದೆ ಕವಿತೆಯಲ್ಲಿ.. ಮನಸ್ಸಿನಲ್ಲಿ ಮೌನ ಮಡುಗಟ್ಟಿಸಿದ ಕವಿತೆ..

    ReplyDelete
  3. ಸೃಜನಶೀಲರು ನೀವು. ಸೋಣೆ ಮಾಸದ ಸೋನೆಗೆ ಮಿಂದೆದ್ದ ಭಾವ.
    ಕ್ಷಣಿಕ ಬಿನ್ನಾಣಕ್ಕೆ ಮಾರುಹೋದ ಜೀವ ಎಲ್ಲೋ ತನ್ನತನವನ್ನು ಕಳಕೊಂಡಾಗ ಅಪರಾಧಿ ಮನೋಭಾವ ಕಾಡತೊಡಗಿದಂತೆ ಅನಿಸಿತು.

    ಸತೀಶಣ್ಣ, ಒಂದು ಪದದ ಬಳಕೆ ಕೊಂಚ ಹಿಡಿಸಲಿಲ್ಲ ನನಗೆ. ನೇರವಾಗಿ ಹೇಳಿದ್ದೇನೆ.

    ReplyDelete