ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Wednesday, April 10, 2013

ಮೊದಲು ನೀ ಬದಲಾಗು.!
---------------------------
ಬಿಸಿರಕ್ತದಲಿ
ಮಿಂದೆದ್ದ ಬೆರಣಿಗಳು
ನಿಗಿ ನಿಗಿ
ಬೇಯ್ದಾಕ್ಷಣಕೆ
ನೀರಲ್ಲಿ
ಪರಿವರ್ತನೆ,
ಬದಲಾವಣೆ
ಬರಬೇಕೆನ್ನುವ ಸಹಜತೆಗೆ
ಶಾಖಕಿಲ್ಲವೇ ವ್ಯವಧಾನ.!
ಮಾನಗೆಟ್ಟ ಬಿಸಿಗೆ
ಅರಿವಾಗಲಿಲ್ಲವೆ ಹೊಸಗೆ.!
ಎದೆಗೆ ಗುಂಡಿಕ್ಕಿ
ಮೀಟಿದಾಗಲೇ ತಿಳಿಯಲಿಲ್ಲವೆ
ಹುಲಿಯ ಚಿತ್ತಾರವಿದು
ಗಮನಿಸಿದರೆ; ಕಾಗದದಮೇಲೆಂದು.
ನಡೆಯಲ್ಲಿ ನುಡಿಯಿರಲಿ
ನಡುಕ ಬಂದರೆ
ಛತ್ರಿಯ ಕೆಳಗಿನ ನೆರಳಿಗೆ
ಜಾಲಿಯ ಮರ
ಗಾಳೀಯ ಬೀಸಿದಂತೆ.!
ಇನ್ನಾದರು ತಿಳಿದೀತೆ
ಹೊಂಗೆಯ  ಮರ ತಂಪೆಂದು.!!!

2 comments:

 1. ಬದಲಾವಣೆಗಳು ಬರದಲ್ಲಿ ಸಾಗುತ್ತಲಿವೆ.. ಸಹಜತೆಗೆ ಮನಸ್ಸು ಮಾಡುವವರೇ ಕಮ್ಮಿ.. ಚಾಟಿ ಏಟಿನಂತಹ ಕವನ

  ReplyDelete
 2. ಜಗದ ಕ್ರೌರ್ಯತೆಯ ಅನಾವರಣ ಇಲ್ಲಿದೆ. ಬದುಕಿನ ಗ್ರಹಿಕೆಯ ಮತ್ತು ಅದರ ಭಾವ ಸಂಕ್ರಮಣಕ್ಕೆ ಸಿಕ್ಕ ನೋವುಗಳ ಚಿತ್ರಣ ಇಲ್ಲಿದೆ.

  "ಎದೆಗೆ ಗುಂಡಿಕ್ಕಿ
  ಮೀಟಿದಾಗಲೇ ತಿಳಿಯಲಿಲ್ಲವೆ
  ಹುಲಿಯ ಚಿತ್ತಾರವಿದು"
  ಅತ್ಯುತ್ತಮ ಸಾದೃಶ್ಯ ಚಿತ್ತಾರ

  ReplyDelete