ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Monday, December 27, 2010

 ನಲ್ಲೆ ನಿನಗಾಗಿ 

ನಿನ್ನ ಕುಡಿನೋಟದ ಮಿಂಚಿಗೆ 
ಮರುಳಾಗಿ   ನಾನು 
ನಿನ್ನ ಕಣ್ಣಂಚಿನ ಕಪ್ಪಾಗಿ 
ಕರಗಿ ಬಿಡುವಾಸೆ
 
ಇದೋ 
ಬರೆದಿರುವೆ  ನಿನಗಾಗಿ 
ಕನಸ ಕಂಗಳಲಿ ಕನವರಿಸುತ 
ಎದೆಯ ಬಾವದಲಿ ಭಾವುಕನಾಗಿ 
ಮಿಂಚ  ಲೇಖನಿ ಹಿಡಿದು 
ಹೃದೆಯದ ಹಾಳೆ ತೆರೆದು...

ಎಲ್ಲವ ತೊರೆದು ಬಂದು ಬಿಡು ಗೆಳತಿ 
ನಾನಿಲ್ಲವ ನಿನಗೆ 
ಬಿಗಿದಪ್ಪಿ ಬಂದಿಸುವೆ 
ನನ್ನ ತೋಳಿನಾಶ್ರಯದಲ್ಲಿ....

ನೀ ಹೆಜ್ಜೆ ಇಡುವಲೆಲ್ಲ
ನಾ ನೆಲದ ಹಾಸಾಗುವೆ 
ನಲುಗದಂತೆ ನಿನ್ನ ಕಾಪಾಡುವೆ
ನನ್ನ  ಉಸಿರಿರುವವರೆಗೂ ...

ಇಂತಿ ನಿನ್ನ ಪ್ರೀತಿಯ.......

ಮರೆತೆನೆಂದರೂ ಮರೆಯಲಿ ಹೇಗೆ ನಿನ್ನ 
ಕಾಡಿ ಕಂಗೆಡಿಸಿ ಮರೆಯಾದ ಮಾನಿನಿ ನೀನು 
ಮಾತಿಗೂ ನಿಲುಕದೆ ಮರೆಯಾದೆಯಲ್ಲೇ..

ಮೌನದಲಿ ಮಾತನಾಡಿ 
ಕಣ್ಣಿನಲ್ಲೇ ನನ್ನ ಕೊಂದು
ಪ್ರೇಮ ಪಾತಕಿಯಾಗಿಬಿಟ್ಟೆಯಲ್ಲೇ..

ಒಂದೇ ಒಂದು ಬಾರಿ ಪ್ರೇಮಿಸಿಬಿಡು ನನ್ನ 
ಮನಸಾರೆ ಪ್ರೀತಿಸುತ್ತಿರುವೆ ನಿನ್ನ 
ನೀನು ಮತ್ತೆ ಕಾಣದಿರು ಸರಿಯೇ....

ಬರೆದು ಬಿಡುವೆ ಷರವ ನೀನೆಂದಿಗೂ ನನ್ನವಳೇ 
ನಿನ್ನ ನೆನಪಲ್ಲೇ ಪ್ರೀತಿಯಿಂದ ಪ್ರೀತಿಸುತ್ತಿರುವ 
ಇಂತಿ ನಿನ್ನ ಪ್ರೀತಿಯ........

Sunday, December 26, 2010

muttina kaavya


ನನ್ನವಳು ನುಡಿದ ನುಡಿಗಳ ಹೆಕ್ಕಿ
ಮುತ್ತಾಗಿ ಪೋಣಿಸುವಾಸೆ
ಮುತ್ತಿನ ಕಾವ್ಯವಾಗಿಸುವಾಸೆ

ಆದರೆ ನುಡಿಯಳು ನನ್ನವಳು
ಸಿಹಿ ನುಡಿಯ
ಸಿಲುಕಿ ಹೋಗಿವೆ ನುಡಿಗಳು
ಎದೆಯಾಳದಲ್ಲಿ
ಬತ್ತಿ ಹೋಗಿವೆ ನೆನಪುಗಳು
ಅವಳ ನೆನಪಿನಂಗಳದ
ತಲೆ ಎಂಬ ಮಸ್ತಿಷ್ಕದಲಿ
ಅಪಘಾತದ ಆಘಾತದಿಂದ

ಆದರು ಒಮೊಮ್ಮೆ ನಗುವ
ಅವಳ ನಗುವನ್ನೇ ಹೆಕ್ಕಿ
ಮಾಲೆಯಾಗಿಸಿ ಧರಿಸಿ
ಮರೆಯುತಿದ್ದೇನೆ
ನಾ ಬರೆಯಬೇಕಿಂದಿದ್ದ ಮುತ್ತಿನ ಹಾರದ ಕಾವ್ಯವ....

ಪ್ರೀತಿ ಇಷ್ಟೇನಾ

   
ಬದುಕು ಅನ್ನೋದು ಇಷ್ಟೇನಾ 
ಪ್ರೀತಿ ಅನ್ನೋದು ಇನ್ಎಸ್ಟ್ ದಿನ

ಹೃದೆಯ ಕೊರೆದು ಘಾಯ ಮಾಡಿ 
ಪ್ರೀತಿ ಅನ್ನೋ ಔಷದ ಹಚ್ಚಿ 
ಪ್ರೇಮವೆಂಬ ಮಾತು ಕೊರೆದು
ಕನಸಿನ ತುಂಬಾ ಕಾಡಿಬೇಡಿ 
ಮನಸಿನ ತುಂಬಾ ರಾಡಿ ಎಬ್ಬಿಸಿ 
ಮಾತಿಗೆ ಮೊದಲು ಪ್ರೀತಿಯ ತುತ್ತು 
ಮುಚ್ಚಟೆಯಾದರೆ ತುಟಿಗೆ ಮುತ್ತನಿತ್ತು 
ತೋಳಲಿ ಬಳಸಿ ಹುಸಿ ಮುನಿಸ ತೋರಿ 
ಅಪ್ಪೋದ್ ಪ್ರೀತೀನಾ, ಒಪ್ಪಿದ್ರೆ ಪ್ರೇಮನಾ 
ಒಪ್ಪದಿದ್ದ್ರೆ ದೂರಾನ...

ಬದುಕು  ಅನ್ನೋದು ಇಷ್ಟೇನಾ  
ಪ್ರೀತಿ ಅನ್ನೋದು ಇನ್ಎಸ್ಟ್  ದಿನ 
   

ಬದಲಾಗೋಣ



ಬದಲಾವಣೆಯ  ತರೋಣ 
ಪ್ರತಿ ಜನ ಮನದಲಿ \ 
ಸ್ವಾರ್ಥವ ನೀಗೋಣ 
ನಿಸ್ವಾರ್ಥವ  ಹೊಂದೋಣ \\ 

ಆಸೆಯ ಬಿತ್ತೋಣ 
ಪ್ರತಿ ಜನ ಮನದಲಿ \ 
ಪ್ರೀತಿಯ ತುಂಬೋಣ
ಜೀವನ ಸಾರ್ಥಕ ಪಡೆಯೋಣ \\ 

ನಾನೇ ಎಂಬ ನಾನತ್ವ  ಮರೆಯೋಣ 
ಪ್ರತಿ ಜನ ಮನದಲಿ\ 
ನಾವೇ ಎಂಬ ಮನುಷ್ಯತ್ವ ಬೆಳೆಸೋಣ 
ನಾವೆಲ್ಲರೂ ಕೈ ಜೋಡಿಸೋಣ 
ಮನುಜ ಮತ ವಿಶ್ವ ಪಥ ಎಂಬ ಕವಿ ವಾಣಿಯ ನಿಜವಾಗಿಸೋಣ \\ 
  

ಓ ಮನಸೇ

 ಓ ಮನಸೇ 

ಮನದೊಳಗೊಂದು ಹೊರಗೊಂದು 
ತೋರಿಕೆಗೊಂದು ಹಾರಿಕೆಗೊಂದು 
ಒಂದೊಂದರಲ್ಲೂ ಗೊಂದಲದ ಗೂಡು
 
ಹೇಳುವುದೊಂದು ಬಯಸುವುದೊಂದು 
ಮಾತಾಡಿದರೆ  ಮಗದೊಂದು 
ಒಂದೊಂದರಲ್ಲೂ ಚಿಂತನೆಯ ಜಾಡು

ನನಗೆ ನಾನೇ ಸಾಟಿ 
ಬೇರಾರಿಲ್ಲ ನನಗೆ ಸರಿಸಾಟಿ 
ಮನದ ತುಂಬಾ ಗರ್ವದ ಮುಸುಕು

ಬೆತ್ತಲಾಗಿಸು ಮನವನ್ನೊಮ್ಮೆ
ಹರಿದು ಹೋಗಲಿ ಕರಿ ಮುಗಿಲು 
ಸ್ವಚ್ಚಂದವಾಗಲಿ ನಿನ್ನ ಮನಸ್ಸು