ನಸುನಾಚಿ ಭಾವ
ಮುಖದಲ್ಲಿ ಹರಡಿ
ಕೋಲ್ಮಿಂಚು ತುಟಿಯಂಚಲಿ...,
ಇಬ್ಬನಿಯಲಿ ತೋಯ್ದು
ಬೆಳಗಿನಲಿ ಅರಳಿದ
ನಗೆ ಮೊಲ್ಲೆ ನೀನು.
ಎಸಳಿನ ಮೇಲೆ ಬಿದ್ದ
ಹಿಮ ಬಿಂದು ನೀನೆಂದು
ಚಪ್ಪರಿಸೆ ನಾನು...!
ಹನಿಯಾಯ್ತು ಸ್ವಾತಿ ಮುತ್ತು...!!
ಪ್ರತಿ ಜಿನುಗು ಸವಿ ಒರೆತ
ಪ್ರೇಮದದ್ಭುತ ಭಾವ...!
ತನುವಾಯ್ತು ಪ್ರೀತಿ ಹೀರಿ
ಸಮ್ಮೋಹದಾನಂದ ಚಂದ..,
ಬೆಳಕಿನೊಳಗಿನ ತೇಜ
ಬೀರದಿರಲಿಂದು ಉರಿಗಣ್ಣ...!
ಬೆಳಕ ಹೀರಿ ತಂಪ ಪ್ರತಿಪಲಿಸೋ
ಚಂದಿರ ನನಗಿಂದು ಅಣ್ಣ...!
ನಲುಗದಿರಲಿ ನಗುವು
ಮುಡಿಪಾಗಿರಲಿ ಒಲವು
ಒಪ್ಪಿಕೊಂಡ ಮೇಲೆ
ಅಪ್ಪಿಕೊಂಡ ಹೃದಯವ
ಬಿಡಲಾರೆನೆಂದೆಂದು ನಂಬು ನನ್ನೊಲವೇ......
ಮುಂಜಾನೆ ನೇಸರ ಕಣ್ಣು ಬಿಡುವಾಗ ಹೊಂಗಿರಣಗಳ ಚೆಲುವನ್ನು ಕಂಡು ಅದು ಭೂರಮೆಯ ಮೇಲೆ ಅವನ ಒಲವ ಮೊದಲ ಸಿಂಚನವೆನ್ನುತ್ತೇನೆ. ಅನುಭವಿಸುವಳು ಆ ಭೂರಮೆ ದಿನ ಆ ಆಲಿಂಗನವನ್ನು. ಹಾಗೆ ದಿನವೂ ಒಲವ ಗಾನ ಈ ಭಾವತೀರಯಾನದ ಗಾನ!
ReplyDeleteಸತೀಶಣ್ಣ ಮೃದು ಪದಗಳ ತೊಟ್ಟಿಲಲಿ ತೂಗಿಸಿದ್ದೀರಿ ಭಾವವನ್ನು. ಖುಷಿ ಕೊಡುತ್ತದೆ ಆಸ್ವಾದಿಸಲು.